ಜಯ ಜಯ ಜಯ ಪ್ರಿಯ ಭಾರತ ಜನಯಿತ್ರೀ ದಿವ್ಯ ಧಾತ್ರಿ
ಜಯ ಜಯ ಜಯ ಶತ ಸಹಸ್ರ ನರನಾರೀ ಹೃದಯ ನೇತ್ರಿ
ಜಯ ಜಯ ಸಶ್ಯಮಲ ಸುಶ್ಯಾಮ ಚಲಚ್ಚೇಲಾಂಚಲ
ಜಯ ವಸಂತ ಕುಸುಮ ಲತಾ ಚಲಿತ ಲಲಿತ ಚೂರ್ಣಕುಂತಲ
ಜಯ ಮದೀಯ ಹೃದಯಾಶಯ ಲಾಕ್ಷಾರುಣ ಪದ ಯುಗಳಾ!
ಜಯ ಜಯ ಜಯ ಪ್ರಿಯ ಭಾರತ ಜನಯಿತ್ರೀ ದಿವ್ಯ ಧಾತ್ರಿ ...
ಜಯ ದಿಶಾಂತ ಗತ ಶಕುಂತ ದಿವ್ಯಗಾನ ಪರಿತೋಷಣ
ಜಯ ಗಾಯಕ ವೈತಾಳಿಕ ಗಳ ವಿಶಾಲ ಪದ ವಿಹರಣ
ಜಯ ಮದೀಯ ಮಧುರಗೇಯ ಚುಂಬಿತ ಸುಂದರ ಚರಣಾ!
ಜಯ ಜಯ ಜಯ ಪ್ರಿಯ ಭಾರತ ಜನಯಿತ್ರೀ ದಿವ್ಯ ಧಾತ್ರಿ
ಜಯ ಜಯ ಜಯ ಶತ ಸಹಸ್ರ ನರನಾರೀ ಹೃದಯ ನೇತ್ರಿ